Saturday, February 12, 2011

Kunthi and her illegitimate son Karna .....the sea... and the unknown...!! A story of Kunthi from Tribal Mahabharatha


Visit blogadda.com to discover Indian blogs
ಕುಂತಿ ಮುಟ್ಟಾಗಿ  ಒಂದೇ  ದಿನವಾಗಿತ್ತು. ಕುಂತಿಯ ಅಪ್ಪ ಮುಳ್ಳು ಬೇಲಿಯ ಕದ ತೆಗೆದು ಹಿತ್ತಲಿಗೆ  ನಡೆಯುತ್ತಾನೆ. ತೂಗುವ  ಹೀರೆಕಾಯಿ  ,ಬಾಗುವ ಬದನೆ ಕಾಯಿ ಕೊಯ್ಯುತ್ತಾನೆ. ತುಡುಪದಲ್ಲಿ  ಮಡಗುತ್ತಾನೆ .ಹಿತ್ತಲಿನಿದ ತಿರುಗಿ ಬರುತ್ತಾನೆ.  ಮುಳ್ಳು ಬೇಲಿಯ ಕದವನ್ನು ಜಡಿಯುತ್ತಾನ

ಕುಂತಿಯ ಅಪ್ಪ. ಬಟ್ಟರ ಮನೆಯ ದಾರಿ ಹಿಡಿಯುತ್ತಾನೆ. ಭಟ್ಟರ ಮನೆಯ ಅಂಗಳದಲ್ಲಿ ನಿಲ್ಲುತ್ತಾನೆ.  .ಭಟ್ಟರು" ಯಾವಾಗಲು ಬರದವನು ಇಂದ್ಯಾಕೆ ಬ೦ದಿಯೋ .ಬಂದ ಕಾರಣ ಹೇಳು"  ಅನ್ನುತ್ತಾರೆ . ಕುಂತಿಯ ಅಪ್ಪ -"ಮಗಳು ಮೀಯುವ  ದಿನ ನೋಡು "ಎನ್ನುತ್ತಾನೆ .ಭಟ್ಟರು ಪುಸ್ತಕ ತೆರೆದು ನೋಡುತ್ತಾರ." ಕುಂತಿಯ ಅಪ್ಪನೇ ಕೇಳು- ಹಿತ್ತಲಲ್ಲಿಯೇ ಬಾವಿ ಕಡೆಯಬೇಕು.... ಕುಂತಿ ಅಲ್ಲಿಯೇ ಮೀಯಬೇಕು:" ಎಂದು ಹೇಳುತ್ತಾರೆ. .ಭಟ್ಟರ ಆ  ಮಾತು ಕೇಳಿಕೊಂಡು  ಕುಂತಿಯ ಅಪ್ಪ  ಮನೆಗೆ ಬರುತ್ತಾನೆ.

ಕುಂತಿಯ ಅಪ್ಪ ಊರ ಮಕ್ಕಳಿಗೆ ಬರಲು ಹೇಳುತ್ತಾನೆ. ಊರ ಮಕ್ಕಳ ಕ್ಯೆಯಲ್ಲಿ ಗುದ್ದಲಿ ಕೊಡುತ್ತಾನೆ  ,ಊರ ಮಕ್ಕಳು ಹಿತ್ತಲಲ್ಲಿ ಬಾವಿ ಕಡೆಯುತ್ತಾರೆ . ಬಾವಿಯಲ್ಲಿ ಒಂದೇ ದಿನಕ್ಕೆ ನೀರು ಬರುತ್ತದೆ. ಕುಂತಿಯ ಅಪ್ಪ ಕುಂತಿಯನ್ನು ಕರೆದು ಹೇಳುತ್ತಾನೆ "ಕುಂತಿ ಕೇಳೆ... ಹಿತ್ತಲಲ್ಲೇ ಬಾವಿ ಕಡೆದಿದ್ದೇನೆ...  ಅಲ್ಲೇ ಸ್ನಾನಮಾಡು .. ಸಮುದ್ರಕ್ಕೆ ಹೋಗಬೇಡ " ಎನ್ನುತ್ತಾನೆ  ಅದಕ್ಕೆ ಕುಂತಿ ಹೇಳುತ್ತಾಳೆ. "ಕೇರೆ ಹಾವಿನಂತೆ ನಾನು ಹೊಂಡದಲ್ಲಿ ಬಡಿದಾಡುತ್ತಾ ಮೀಯಲಾರೆ ... ನಾನು ಮೂಡಣ ಸಮುದ್ರಕ್ಕೆ ಹೋಗುತ್ತೇನೆ..." ಎಂದು ಹೇಳಿ ಸಮುದ್ರಕ್ಕೆ ಹೊರಡುತ್ತಾಳೆ ಕುಂತಿ."ಮೂಡಣ ಸಮುದ್ರದಲ್ಲಿ ಕಳ್ಳರಿರುತ್ತಾರೆ ಇಲ್ಲೇ ಮೀಯು" ಅನ್ನುತ್ತಾನೆಕುಂತಿಯ ಅಪ್ಪ. ಕುಂತಿ ಎಷ್ಟು ಹೇಳಿದರೂ ಕೇಳುವದಿಲ್ಲ ......

 ಕುಂತಿ ಅಪ್ಪನ ಮಾತು ಮೀರಿ   ಮೂಡಣ ಸಮುದ್ರಕ್ಕೆ ಹೋಗುತ್ತಾಳೆ . ಸುಮದ್ರ ತೀರದಲ್ಲಿ ಹೋಗಿ ನಿಲ್ಲುತ್ತಾಳೆ.ಕುಂತಿಯಮ್ಮ. ಮೊಣ ಕಾಲಿನ ನೀರಿಗೆ ನಡೆಯುತ್ತಾಳೆ....ಮಂಡಿ ನೀರಿಗೆ ನಡೆಯುತ್ತಾಳೆ.... ಸೊಂಟದ ನೀರಿಗೆ ನಡೆಯುತ್ತಾಳೆ..... ಕೊರಳ ತನಕ ನೀರಿಗೆ ನಡೆಯುತ್ತಾಳೆ ...... ಹಾಲಿನ0ಥ ತೆರೆ ಬರುತ್ತದೆ...., ನೀರಿನಂತ ತೆರೆ  ಬರುತ್ತದೆ..... ನೆತ್ತರಿನಂತ ತೆರೆ  ಬರುತ್ತದೆ

 ಕುಂತಿ ಹೊಳೆ ನೀರು ಮೀಯುವಾಗ ಕಳ್ಳತನದಲ್ಲಿ ಬಂದವರಾರು....?ಆತ  ಸಮುದ್ರದಲ್ಲಿ ಕಳ್ಳನಂತೆ   ಶೋದಿಸುತ್ತ ಕುಂತಿ ಇದ್ದಲ್ಲಿಗೆ ಬರುವನು. ನೀರಿನಲ್ಲಿ ಕುಂತಿಯ ಸಂಗ ಮಾಡುವನು . ಕುಂತಿ  ಬಸಿರಾಗುವಳು
ಕುಂತಿ ಮನೆಗೆ ಬರುವಳು.

ಕುಂತಿಗೆ ಹೆದರಿಕೆ ಯಾಗುತ್ತದೆ. ಕುಂತಿ  ದನಕಾಯುವ ಬಯಲಿಗೆ ನಡೆಯುತ್ತಾಳೆ.
ದನಕಾಯುವ ಮಕ್ಕಳನ್ನು ಕರೆಯುತ್ತಾಳೆ . ತನ್ನ ಪಕ್ಕದಲ್ಲಿ ಕೂರಿಸಿಕೊಂಡು ತನಗೊಂದು ಮದ್ದು ಹೇಳೆಂದು ಕೇಳುತ್ತಾಳೆ."ಕೆಳೆಲೇ  ಕುಂತಮ್ಮ ...ನೀನೆ ಕೇಳೆ ...ನಾವೆಂಥ ಮದ್ದು  ಹೇಳುವದು..? ಎಂದು ಪ್ರಶ್ನಿಸುವ ಗೋವಳರು ಕುಂತಿ ಗೆ ಮದ್ದು ಹೇಳುತ್ತಾರೆ. "ಹಾಳು ಕರ್ಕಿ ಬೇರು , ಕಾಡು ಬೆಂಡೆ ಬೇರು ಯನ್ನು ಅರೆದು ಕೊಳ್ಳೆ ಕುಂತಿ.... ಅದನ್ನೇ ಕುಡಿದುಕೊ.....". ಎಂದು ಹೇಳುತ್ತಾರೆ.  ದನದದಕೊಟ್ಟಿಗೆಯಲ್ಲಿ ಮಲಗಿಕೊಳ್ಳೆ  ಕುಂತಮ್ಮ ....." ಎಂದು ಸಲಹೆ ನೀಡುತ್ತಾರೆ ಕುಂತಿ ಅಲ್ಲೇ  ಗಂಡು ಮಗುವನ್ನು ಹಡೆಯುತ್ತಾಳೆ ಗಂಡನಿಲ್ಲದೆ ಗಂಡು ಮಗುವನ್ನು ಕುಂತಿ ಹಡೆದಳೆ0ದು   ಊರವರೆಲ್ಲಾ ನಗುತ್ತಾರೆ.







Traditional Baskets and other weaving crafts with natural fibers in Uttara Kannada-western Ghat region

  While  weaving craft with natural fibers  is one of the widest spread crafts in the history of any human civilization, it is hard to say j...